ನಾನು ಹೆರಿಗೆಯ ನಂತರ ದೂರ ಪ್ರಯಾಣ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಹಾಗೋ ಹೀಗೋ ನನ್ನ ಪತಿ ಅವರ ಸ್ನೇಹಿತರು ಮತ್ತು ಅವರ ಫ್ಯಾಮಿಲಿ ಕೊನೆಗೂ ಬಹಳ ಮುಂದೂಡುವಿಕೆಯ ನಂತರ ಒಂದು ರೆಸಾರ್ಟ್ ಗೆ ಹೋಗುವುದೆಂದು (ಹೌದು, ಇಲ್ಲಗಳ ನಡುವೆ )ತೀರ್ಮಾನಿಸಲಾಯಿತು.
4 ಫ್ಯಾಮಿಲಿ ಯ ಒಟ್ಟು 15 ಜನರು, 3 ಕಾರ್ ನಲ್ಲಿ ಸುಮಾರು 6 ಗಂಟೆಗೆ ನಮ್ಮ ಜರ್ನಿಯನ್ನ ಶುರು ಮಾಡಿದ್ವಿ. ಉಡುಪಿಯ ಬ್ರಹ್ಮಾವರದ ಕಡೆಗೆ ನಮ್ಮ ಪ್ರಯಾಣ ಶುರುವಾಯಿತು. ಹಾಗೆಯೇ ಮುಂದೆ ಸಾಗುವಾಗ ಹೊಟ್ಟೆ ಹಸಿವಿಂದ ಚುರ್ ಗುಟ್ಟಿದಾಗ ದಾರಿಯ ನಡುವೆ ಸಣ್ಣದೊಂದು ಹೋಟೆಲ್ನಲ್ಲಿ ಉಪಹಾರ ಮುಗಿಸಿದೆವು. ಮಾತು ಹರಟೆ ಚರ್ಚೆಯೊಂದಿಗೆ ಮತ್ತೆ ಪ್ರಯಾಣ ಮುಂದುವರೆಸಿದೆವು.
ಸುಮಾರು 9 ಗಂಟೆಯ ಹೊತ್ತಿಗೆ ತಲುಪಿದ ನಮಗೆ ಇನ್ನೊಮ್ಮೆ ಹೊಟ್ಟೆ ಗಟ್ಟಿಮಾಡಿಕೊಳ್ಳುವ ಅವಕಾಶ ರೆಸಾರ್ಟ್ನವೆರೆ ಕಲ್ಪಿಸಿದ್ರು. ಅವರು ಬಡಿಸಿದ ಇಡ್ಲಿ ಚಟ್ನಿ ಮತ್ತು ಕಾಫಿ ಯ ಸವಿ ಬಹಳ ಹೊತ್ತಿನ ವರೆಗೆ ಬಾಯಿಯಷ್ಟೇ ಅಲ್ಲ ನಮ್ಮ ಮಾತುಗಳ ನಡುವೆಯೂ ಹರಿದಾಡಿತು.ಎಲ್ಲರು ರೆಡಿ ಆದ್ಮೇಲೆ ನಮಗೆಂದು ಸಣ್ಣ ಬೋಟ್ ರೆಡಿ ಇತ್ತು. ಎಲ್ಲರು ಆ ಬೋಟ್ ಏರಿ ಒಂದು ದಡದಿಂದ ಮತ್ತೊಂದು ದಡ (ಸಣ್ಣ ದ್ವೀಪಕ್ಕೆ)ಹೊರಟೆವು.
ದೂರದಿಂದ ಹುಲ್ಲಿನ ಪೊದೆಯಂತೆ ಕಾಣುತ್ತಿದ್ದ ರೆಸಾರ್ಟ್, ಬೋಟ್ ನಿಂದ ಇಳಿಯುತ್ತಿದ್ದಂತೆ ಬೇರೆಯೇ ರೀತಿ ಕಂಡಿತು. ಡಿಜೆ ಸಾಂಗ್ಸ್ ನಮ್ಮನ್ನು ಸ್ವಾಗತಿಸಿತು. ಮಕ್ಕಳು ಇಳಿಯುತ್ತಿದ್ದಂತೆ ಹೆಜ್ಜೆ ಹಾಕಲು ಶುರುಮಾಡಿದರು.
ರಿಲಾಕ್ಸ್ ರೆಸಾರ್ಟ್ ಕಡಿಮೆ ವೆಚ್ಚದ್ದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಸುತ್ತಲೂ ನೀರು, ನಡುವೆ ಸಣ್ಣ ದ್ವೀಪದಲ್ಲಿ ಈ ರೆಸಾರ್ಟ್ ನಿರ್ಮಿಸಲಾಗಿದ್ದು, ನೆಟ್ ಮತ್ತು ಟೈಯರ್ ಗಳನ್ನ ಬಳಸಿ ಇಲ್ಲಿ ವಿವಿಧ ಮಾದರಿಯ ಆಟಆಡುವ ಪರಿಕರಗಳನ್ನು ನಿರ್ಮಿಸಲಾಗಿದೆ. ಟಯರ್ ಉಯ್ಯಾಲೆ, ಕಾರ್, ಸೆಲ್ಫಿ ಸ್ಟಾಂಡ್, ನೆಟ್ನಿಂದ ತಯಾರಾದ ಜಂಪಿಂಗ್ ಸ್ಪಾಟ್ ಗಳು ಇಲ್ಲಿನ ಆಕರ್ಷಣೆ. ನಾವು ಹೋದ ಕೂಡಲೇ ಬಟ್ಟೆ ಬದಲಾಯಿಸಿ ಆಟ ಆಡಲು ರೆಡಿ ಆಗಿತ್ತದ್ದ ಹಾಗೆ ರೆಸಾರ್ಟ್ ಸ್ಟಾಫ್ ಕಾಲಲ್ಲಿ ಕ್ರಿಕೆಟ್ ಆಟ ಆಡಿಸಿದ್ರು. ಸ್ವಲ್ಪ ಹೊತ್ತು ವಾಲಿಬಾಲ್, ಕ್ರಿಕೆಟ್, ಥ್ರೋಬಾಲ್ ಆಡಿದ ನಂತರ, ನೀರಲ್ಲಿ ಇಳಿಯುವ ಕಾತುರ ಹೆಚ್ಚಾಯಿತು.ಅದಾದ ಮೇಲೆ ನೀರಿನಲ್ಲಿ ತ್ರೋ ಬಾಲ್ ಆಡಿ, ಬೋಟಿಂಗ್ ಮಾಡಿ, ಕೊನೆಗೆ ವಾಟರ್ ಸ್ಪ್ರಿಂಕ್ಲೆರ್ ನ ಅಡಿಯಲ್ಲಿ ಡಿಜೆ ಗೆ ಸ್ಟೆಪ್ಸ್ ಹಾಕಿ, ಮದ್ಯಾಹ್ನ ಹೊಟ್ಟೆತುಂಬ ಊಟ ಮಾಡಿ, ಸಂಜೆಯ ಕಾಫಿ ಸವಿದು, ಅದೇ ಬೋಟ್ನಲ್ಲಿ ವಾಪಾಸ್ ದಡ ತಲುಪಿದೆವು.
ಒಟ್ಟಾಗಿ ಒಂದು ದಿನದ ರೆಸಾರ್ಟ್ ಪ್ರವಾಸ ಮನಸ್ಸು, ಮತ್ತು ದೇಹಕ್ಕೆ ಮುದ ನೀಡಿದ್ದಲ್ಲದೆ ನವಿರಾದ ನೆನಪನ್ನೂ ಹುಟ್ಟುಹಾಕಿತು.