ಅನಾದಿಕಾಲದಿಂದಲೂ ಭಾರತದಲ್ಲಿ ಮಹಿಳೆಯರು ಸೀರೆ ಧರಿಸುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಸೀರೆ ಅದರೊಂದಿಗಿನ ಕುಪ್ಪಸ ಹೆಣ್ಣಿನ ದೇಹ ಸುತ್ತುತ್ತಿತ್ತೇ ಹೊರತು ಅದರಲ್ಲಿ ಯಾವುದೇ ಫ್ಯಾಷನ್ ಕಂಡು ಬರುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ ಮಹಿಳೆಯರಿಗಾಗಿಯೇ ನಾನಾ ವಿಧವಾದ ಉಡುಪುಗಳು ಜನ್ಮ ತಾಳುತ್ತಿವೆ. ಇಷ್ಟಾದರೂ ಇಂದಿಗೂ ಅದೆಷ್ಟೋ ಮಹಿಳೆಯರು ಸೀರೆಯನ್ನು ಇಷ್ಟಪಡುತ್ತಾರೆ ಎಂದರೆ ಇದಕ್ಕೆ ಸೀರೆಯ ವೈಶಿಷ್ಟ್ಯವೇ ಕಾರಣ ಎನ್ನಬಹುದು.
ಇಂದಿನ ನಾರಿ ಮಣಿಗಳು ಬರೀ ಸೀರೆಯನ್ನಷ್ಟೆ ಅಲ್ಲದೆ ಅದರೊಂದಿಗಿನ ಬ್ಲೌಸ್ ಬಗ್ಗೆಯೂ ಸಹ ವಿಶೇಷ ಗಮನ ಹರಿಸುತ್ತಿದ್ದಾರೆ. ವಿವಿಧ ಬಗೆಯ ಬ್ಲೌಸ್ ವಿನ್ಯಾಸ ದಿನೇ ದಿನೇ ಹುಟ್ಟಿಕೊಳ್ಳುತ್ತಿವೆ.ಅದರಂತೆಯೇ ಇಂದು ಕೊಂಚ ಉದ್ದ ತೋಳಿನ ಕುಪ್ಪಸಗಳು ಫ್ಯಾಷನ್ ಜಗತ್ತಿಗೆ ಲಗ್ಗೆ ಇಟ್ಟಿವೆ. ಈ ರೀತಿಯ ವಿನ್ಯಾಸ ಹೊಸತಲ್ಲ ಆದರೆ ಎಷ್ಟೋ ವರ್ಷಗಳ ನಂತರ ಇದು ಪ್ರಚಲಿತವಾಗಿದ್ದು ಓಲ್ಡ ಈಸ್ ಗೋಲ್ಡ್ ಎಂಬಂತಾಗಿದೆ.
ಎಲ್ಲಾ ಬಗೆಯ ಸೀರೆಗಳಿಗೆ ಒಪ್ಪುತ್ತೆ……
ಈ ತರಹದ ಬ್ಲೌಸಗಳು ಶಿಫಾನ್ ಕಾಟನ್, ಜಾರ್ಜೆಟ್ ಇನ್ನಿತರೆ ಸೀರೆಗಳಿಗೆ ತುಂಬ ಸುಂದರವಾಗಿ ಕಾಣುತ್ತದೆ. ರೇಷ್ಮೆ ಸೀರೆಗೆ ಉತ್ತಮವಾಗಿ ಹೊಂದುತ್ತದೆ. ಇನ್ನು ಇದಕ್ಕೆ ತ್ರೆಡ್ ಅಥವಾ ಪ್ಯಾಚ್ ವರ್ಕ ಮಾಡಿಸಿದರಂತೂ ತುಂಬಾ ರಿಚ್ ಲುಕ್ ಕೊಡುತ್ತದೆ. ಸೀರೆ ಸಿಂಪಲ್ಲಾಗಿ ಇದ್ದರೂ ಈ ತರಹದ ಬ್ಲೌಸ್ ಇಂದ ಗ್ರ್ಯಾಂಡ ಲುಕ್ ಪಡೆಯ ಬಹುದಾಗಿದೆ.
ಸಾಂಪ್ರದಾಯಿಕ ವಾಗಿ ಕಾಣಿಸುತ್ತದೆ ….
ಇನ್ನು ಈ ತರಹದ ಬ್ಲೌಸಗಳು ಮದುವೆ ಮತ್ತಿತರ ಸಮಾರಂಭದಲ್ಲಿ ಧರಿಸಿದಾಗ ಟ್ರೆಡಿಶನಲ್ ಆಗಿ ತೋರುವುದರಲ್ಲಿ ಯಾವುದೇ ಸಂಶಯವಿಲ್ಲ .
ಆಫೀಷಿಯಲ್ ಲುಕ್ …..
ಈ ತರಹದ ಬ್ಲೌಸ್ ಗಳು ಕೇವಲ ಸಾಂಪ್ರದಾಯಿಕವಾಗಿ ಕಾಣಿಸುವುದಲ್ಲದೇ ಅಫಿಷಿಯಲ್ ಆಗಿ ಕಾಣುವುದು. ಕಾಟನ್ ಸೀರೆಗೆ ಇಂತಹ ಬ್ಲೌಸಗಳನ್ನು ಧರಿಸಿದರೆ ಹಲವಾರು ಆಫಿಷಿಯಲ್ ಕಾರ್ಯಕ್ರಮಗಳಿಗೆ ಒಪ್ಪುತ್ತದೆ. ಇನ್ನೂ ಹೈ ನೆಕ್ ಬ್ಲೌಸಗಳಿಗೆ ಈ ತರಹದ ಉದ್ದ ತೋಳು ಹೇಳಿಮಾಡಿಸಿದಂತ್ತಿರುತ್ತದೆ.
ಹಳೆ ಉಡುಗೆ ಹೊಸ ಲುಕ್…..
ಹಿಂದೆ ಹೆಣ್ಣು ಮೈ ಕಾಣಿಸುವಹಾಗಿರಲಿಲ್ಲ ಹಾಗಾಗಿ ಈ ತರಹದ ಉಡುಗೆ ರೂಢಿಯಲ್ಲಿತ್ತು.
ಆದರೆ ಇದೇ ಈಗ ಫ್ಯಾಷನ್ ಆಗಿ ಮಾರ್ಪಟ್ಟಿರುವುದೇ ವಿಶೇಷ. ಅಷ್ಟೇ ಅಲ್ಲದೆ ಈ ತರಹದ ಬ್ಲೌಸಗಳನ್ನು ತೆಳ್ಳಗಿನ ಹೆಂಗಸರು ಧರಿಸಿದಾಗ ಕೊಂಚ ದಪ್ಪ ಕಾಣಿಸುತ್ತಾರೆ ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
ನಟಿಯರಿಗೂ ಇದರತ್ತ ಒಲವು…
ಈ ತರಹದ ಬ್ಲೌಸಗಳು ಹಲವಾರು ನಟಿಯರ ಮನಗೆದ್ದಿವೆ. ಪ್ರಶಸ್ತಿ ಪ್ರಧಾನ ಸಮಾರಂಭವನ್ನೂ ಒಳಗೊಂಡಂತೆ ಮದುವೆ ಮತ್ತು ಇನ್ನಿತರ ಕಾರ್ಯಕ್ರಮ ದಲ್ಲಿ ಸಾಮಾನ್ಯವಾಗಿ ಈ ತರಹದ ಟ್ರೆಂಡನ್ನು ನಾವು ಕಾಣಬಹುದು.